Sunday, August 7, 2022

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹುಟ್ಟುಹಬ್ಬ ಆಚರಣೆ


 


ಶಹಾಪುರ: ಡಾ.ಜಿ ಪರಮೇಶ್ವರ ಯುವ ಸೈನ್ಯ ಮತ್ತು ಸುಮಿತ್ ಸಾಮಾಜಿಕ ಸಾಂಸ್ಕ್ರುತಿಕ  ಶಿಕ್ಷಣ  ಸಂಸ್ಥೆ  ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ 71ನೇ ಹುಟ್ಟು ಹಬ್ಬವನ್ನು 

ಶಹಾಪುರ ನಗರದಲ್ಲಿರುವ ಸಾರಿಪುತ್ರ ಬುದ್ಧ ವಿಹಾರದ ಆವರಣದಲ್ಲಿ 100 ಸಸಿ ನೆಡುವುದರ ಮೂಲಕ ಮತ್ತು   ರಸ್ತಾಪುರ ಸರ್ಕಾರಿ ಪ್ರೌಢ  ಶಾಲೆಯಲ್ಲಿ  ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್  ಮತ್ತು ಕ್ರೀಡಾ ಸಾಮಗ್ರಿಗಳನ್ನು ಹಾಗೂ ವಸತಿ ನಿಲಯಕ್ಕೆ ತಟ್ಟೆ ಲೋಟ  ನೀಡುವುದರ ಜೊತೆಗೆ ಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು.

ಡಾ.ಜಿ ಪರಮೇಶ್ವರ ಯುವ ಸೈನ್ಯದ ಜಿಲ್ಲಾಧ್ಯಕ್ಷರಾದ ಮೌನೇಶ್  ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಪುತ್ರ ಬುದ್ಧ ವಿಹಾರದ ಆವರಣದಲ್ಲಿ 100 ಸಸಿ ನೆಟ್ಟು ತಾಲೂಕಿನ  ರಸ್ತಾಪುರ ಸರ್ಕಾರಿ ಪ್ರೌಢ  ಶಾಲೆಯಲ್ಲಿ   ಎಸ್. ಎಸ್. ಎಲ್. ಸಿ.ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್  ಮತ್ತು ಕ್ರೀಡಾ ಸಾಮಗ್ರಿಗಳ  ಜೊತೆಗೆ  ವಸತಿ ನಿಲಯಕ್ಕೆ ತಟ್ಟೆ ಲೋಟ  ನೀಡುವುದರ ಜೊತೆಗೆಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಮತ್ತು ಬ್ರೆಡ್‌ ವಿತರಿಸಿ ಈ ವೇಳೆ ಮಾತನಾಡಿದ ಅವರು ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ಡಾ.ಜಿ.ಪರಮೇಶ್ವರ್ ಓರ್ವ ಸಜ್ಜನ ರಾಜಕಾರಣಿ, ತಮ್ಮ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅವರು ಬದುಕು ಕಟ್ಟಿಕೊಳ್ಳಲ ನೆರವಾಗಿದ್ದಾರೆ. ಐದು ಭಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಂತಹವರು ಇನ್ನೂ ಹತ್ತಾರು ವರ್ಷಗಳ ಕಾಲ ಬದುಕಿ, ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮತ್ತಷ್ಟು ಬಡವರಿಗೆ ನೆರವು ನೀಡುವಂತಾಗಲಿ  ಎಂದು ಶುಭ ಹಾರೈಸುವ ದಾಗಿ ತಿಳಿಸಿದರು.ತಾಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅರ್ಬೊಳ ಮಾತನಾಡಿ ಡಾ.ಜಿ.ಪರಮೇಶ್ವರ್ ಅವರು ಸಮಾನತೆಯ ಸಮಾಜ ನಿರ್ಮಾಣದ ಕನಸುಗಾರ, ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಎಲ್ಲ ರೀತಿಯ ವಾತಾವರಣ ನಿರ್ಮಾಣವಾಗಿದೆ. ಜನಸಾಮಾನ್ಯರಿಂದ ಹೊರ ಬರುತ್ತಿರುವ ಪ್ರತಿಕ್ರಿಯೆ ಮತ್ತು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಲ್ಲಿ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ನಂತರ  ಕವಿ, ಯುವ ಬರಹಗಾರ ಪ್ರಾಧ್ಯಾಪಕರಾದ ಭೀಮಣ್ಣ ಮಂಡಗಳ್ಳಿ ಮಾತನಾಡಿ ಸಮಾಜದಲ್ಲಿ ಎಲ್ಲಾ ಇದ್ದು ಇರದಂತೆ ಬದುಕುವ ಗುಂಪು ಒಂದು ಕಡೆಯಾದರೆ ಇದ್ದದ್ದರಲ್ಲಿಯೇ ಹಂಚಿ ತಿನ್ನುವ ಗುಣ ಹೊಂದಿರುವ ಗುಂಪು ಅತೀ ವಿರಳ, ತನ್ನ ಸಾಮರ್ಥ್ಯಕ್ಕನುಗುಣವಾಗಿ ಮಲ್ಲಿಕಾರ್ಜುನ ಆರಬೋಳ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಅಭಿನಂದನಾರ್ಹ, ಪ್ರತಿ ಕಾರ್ಯಕ್ರಮಗಳಲ್ಲಿ ಈ ರೀತಿಯ ಮಾನವೀಯ ಕಾರ್ಯಗಳನ್ನು ಮಾಡುತ್ತಿರುವುದು ಸೈನ್ಯದ ಹಾಗೂ ಅವರ ಸಂಸ್ಥೆಯ ಹೆಗ್ಗಳಿಕೆ ಎಂದು ನುಡಿದರು. 

ಈ ಸಂಧರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜು ಅಣಬಿ, ವಿರೇಶ್ ಅಂಗಡಿ,  ರಸ್ತಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಂಕಣ್ಣ ನಾಟೇಕರ್, ಭಾಗ್ಯವಂತಿ ಮ್ಯಾನ್ ಪವರ್ ಏಜನ್ಸಿ ಮುಖ್ಯಸ್ಥರಾದ ಮಲ್ಲಿಕಾರ್ಜುನ ಆಲೂರು, ಶಾಲಾ ಶಿಕ್ಷಕರಾದ ಜಟ್ಟೆಪ್ಪ ಬಾವಿಮನಿ, ಏಕನಾಥ್, ದೈಹಿಕ ಶಿಕ್ಷಕರಾದ ಚಂದ್ರಶೇಖರ ವೈದ್ಯ, ವಸತಿ ನಿಲಯ ಪಾಲಕಿ ಶಾರದ, 

ಭಾಗ್ಯ ಸಂಗಡಿಗರಿಂದ ಪ್ರಾರ್ಥನಗೀತೆ ಹಾಡಿದರು ದೇವಿಂದ್ರ ಹುಲ್ಕಲ್ ನಿರೂಪಿಸಿದರು,  ಶೇಖರ್ ಬಡಿಗೇರ್ ವಂದಿಸಿದರು.

No comments:

Post a Comment

ವಡಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ವಡಗೇರಾ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡ...