Monday, August 22, 2022

ವಿದ್ಯುತ್ ಚಾಲಿತ ವಾಹನ ಬಳಕೆಯಿಂದ ಬಹುವಿಧ ಅನುಕೂಲ: ಎಸ್.ಪಿ. ಡಾ. ವೇದಮೂರ್ತಿ


ಯಾದಗಿರಿ: ವಿದ್ಯುತ್ ಚಾಲಿತ ವಾಹನಗಳು ಬಳಸುವುದರಿಂದ ಬಹುರೀತಿಯ ಅನುಕೂಲಗಳು ಇವೆ  ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಅಭಿಪ್ರಾಯಪಟ್ಟರು. ನಗರದ ಶ್ರೀ ಬಾಲಾಜಿ ದೇವಸ್ಥಾನದ ಸಮೀಪ ಗ್ರಾಮೀಣ ಠಾಣೆ ಬಳಿ ಇರುವ ಓಕಿನೋವಾ ಇವಿ ಬೈಕ್ ಶೋರೂಂ ಶ್ರೀ ಬಸವ ಎಲೆಕ್ಟೀಕ್ ಮೋಟಾರ್ಸ್ ವತಿಯಿಂದ ಸ್ವಾತಂತ್ರ್ಯ  ಅಮೃತ ಮಹೋತ್ಸವ ಹಾಗೂ ಜನರಿಗೆ ಇವಿ (ವಿದ್ಯುತ್ ಚಾಲಿತ) ದ್ವಿಚಕ್ರ ವಾಹನಗಳ ಬಗ್ಗೆ ಜಾಗೃತಿ ಮೂಡಿಸುವ ಬೈಕ್ ರ‍್ಯಾಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು. ಇವಿ ವಾಹನಗಳು ಬಳಸುವುದರಿಂದ ಪರಿಸರ ಮಾಲಿನ್ಯ ತಡೆಯಲು ಸಾದ್ಯ ಇದರಿಂದ ಜಾಗತಿಯ ಬಿಸಿ ಹೆಚ್ಚಳಕ್ಕೆ ನಮ್ಮದೇ ಆದ ಕೊಡುಗೆ ನೀಡಿದಂತಾಗುತ್ತದೆ. ಆರ್ಥಿಕವಾಗಿ ಇಂದಿನ ದಿನಮಾನಗಳ ದುಬಾರಿ ಬದುಕಿನಲ್ಲಿ ತೀರ ಮಿತವ್ಯಯಕಾರಿಯಾಗಿರುವ ಈ ವಾಹನಗಳು ಬಳಕೆ ಸೂಕ್ತ ಮತ್ತು ವಾಹನಗಳಿಗೆ ಸರ್ಕಾರದ ಬೆಂಬಲವೂ ಇರುತ್ತದೆ ಎಂದು ವಿವರಿಸಿ ಪ್ರೋತ್ಸಾಹಿಸಿದರು.

ವೀರಭಾರತಿ ಪ್ರತಿಷ್ಠಾನ ಅದ್ಯಕ್ಷ, ಯಾದಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ವೈಜನಾಥ ಹಿರೇಮಠ ಮಾತನಾಡಿ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳು ಡೀಸೆಲ್ ಪೆಟ್ರೊಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದಲೇ ಇವಿಗಳಿಗೆ ಸಬ್ಸಿಡಿ ನೀಡುತ್ತಿದ್ದಾರೆ. ಇದಲ್ಲದೇ ಭವಿಷ್ಯದಲ್ಲಿ ವಿದ್ಯುತ್ ವಾಹನಗಳೇ ದೇಶದಲ್ಲಿ ಕಂಡುಬರಲಿವೆ ಎಂದು ಹೇಳಿದರು.

ಬಸವ ಮೋಟರ್ಸ್ನ ಮುಖ್ಯ ಪ್ರವರ್ತಕರಾದ ಅರುಣಕುಮಾರ ಹಿರೇಮಠ ಮಾತನಾಡಿ ಜನರಲ್ಲಿ ಈ ವಾಹನಗಳ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜಪಾನ್ ಮೂಲದ  ತಾಂತ್ರಿಕತೆ ಹಾಗೂ ದೇಶಿಯವಾಗಿ ತಯಾರಾದ ಬಿಡಿಭಾಗಗಳಿಂದ ಸಿದ್ದಗೊಂಡಿರುವ ಓಕಿನೋವಾ ವಾಹನ ಅತ್ಯಂತ ಹಿತಕಾರಿ, ಮಿತವ್ಯಯಕಾರಿಯಾಗಿದೆ ಎಂದು ವಿವರಿಸಿದರು. ಇದಲ್ಲದೇ ಸ್ವಾತಂತ್ರ್ಯದ  ಅಮೃತ ವರ್ಷದಲ್ಲಿ ವಾಹನಗಳು ದೇಶಾದ್ಯಂತ ರಸ್ತೆಗಿಳಿದಿರುವುದರಿಂದ ಜಿಲ್ಲೆಯಲ್ಲಿಯೂ ಈ ವಾಹನಗಳ ಬಗ್ಗೆ ಪ್ರಚಾರ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಂಪನಿಯ ಕರ್ನಾಟಕ ಮಾರುಕಟ್ಟೆ ವ್ಯವಸ್ಥಾಪಕ ವಿಜಯಕುಮಾರ ಹಿರೇಮಠ, ಬೀರಲಿಂಗ ದುಪ್ಪಲ್ಲಿ ಪೊಲೀಸ್, ಹಾಜಿ, ಶೋರೂಮ್ ಸಿಬ್ಬಂದಿ ಪ್ರಶಾಂತ, ಸಂಪತ್, ಅಜಯ್, ವಸಿಮ್, ಜಲಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


No comments:

Post a Comment

ವಡಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ವಡಗೇರಾ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡ...