Tuesday, August 23, 2022

ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಆಧಾರ್ ಲಿಂಕ್ ಮಾಡಬೇಕು ಸ್ನೇಹಲ್ ಆರ್

 



ವಡಗೇರಾ: ಬೂತ್ ಮಟ್ಟದ ಅಧಿಕಾರಿಯು ಎಲ್ಲಾ ವಿವರಗಳನ್ನು ಪರಿಶೀಲಿಸಿ ವೋಟರ್ ಐಡಿಗೆ ಆಧಾರ ಲಿಂಕ್ ಮಾಡಲು ಮನೆ-ಮನೆಗಳಿಗೆ ಭೇಟಿ ನೀಡಬೇಕು. ನಂತರ ಅದು ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಪಟ್ಟಣದ ಪ್ರೌಢಶಾಲೆಯಲ್ಲಿ ನಡೆದ ಬಿಎಲ್ಓ ದವರಿಗೆ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕುರಿತ ತರಬೇತಿಗೆ ಜಿಲ್ಲಾಧಿಕಾರಿ  ಸ್ನೇಹಲ್ ಆರ್. ಅವರು 
ಭೇಟಿ ನೀಡಿ ನಿರ್ದೇಶಿಸಿದರು.

ಪಟ್ಟಣದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಕ್ಕಳಿಗೆ ಅಡುಗೆ ತಯಾರಿಸಿ ಕೊಡುವ ಕೋಣೆಗಳಿಗೆ ಮತ್ತು ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿ ವೀಕ್ಷಿಸಿದರು, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಕೂಡ ಪರಿಶೀಲಿಸಿದರು.

ಆಧಾರ್‌ ಕಾರ್ಡ್ ಇಲ್ಲದಿದ್ದರೆ ಪರ್ಯಾಯ ದಾಖಲಾತಿಯೂ ನೀಡಬಹುದಾಗಿದೆ. ಆಧಾರ್ ಸಂಖ್ಯೆ ಒದಗಿಸುವುದು ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿದೆ. ಆಧಾರ್ ಜೋಡಣೆ ಕಡ್ಡಾಯವಲ್ಲ ಬದಲಾಗಿ ಮತದಾರರ ಆಧಾರ್‌ ಮತ್ತು ಮತದಾರರ ಚೀಟಿ ಜೋಡಣೆಯಾದರೆ ಹಲವು ಪ್ರಯೋಜನಗಳಿದ್ದು, ಪಾರದರ್ಶಕ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಜನರಿಗೆ ಮನವರಿಕೆ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.


ಆನ್ಲೈನ್ ಮತ್ತು ಆಫ್ಲೈನಲ್ಲಿಯೂ ಅರ್ಜಿ ಸಲ್ಲಿಸಬಹುದು

NVSP, (ಎನ್ ವಿ ಎಸ್ ಎಸ್ ಪಿ ) VHA (ವಿ ಎಚ್ ಎ )

ERONET (ಈ ಆರ್ ಜಿ ಎನ್ ಈ ಟಿ ಮತ್ತು GARUDA (ಗರುಡ) ಅಪ್ಲಿಕೇಶನಗಳಲ್ಲಿ ಫಾರ್ಮ್ 6Bಯನ್ನು ಪಡೆದು ಆಧಾರ ಸಂಖ್ಯೆಯನ್ನು ಜನರಿಗೆ ಸ್ವಯಂ ನೋಂದಾಯಿಸಲು ಅಧಿಕಾರಿಗಳು ತಿಳಿಸಬೇಕು ಎಂದರು. ಈ ಸಂದರ್ಭದಲ್ಲಿ ವಡಿಗೇರಾ ತಹಶೀಲ್ದಾರ ಸುರೇಶ ಅಂಕಲಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾ ಅಧಿಕಾರಿ ಬಸವರಾಜ ಎಮ್ ಸಜ್ಜನ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಉಪ ತಹಶೀಲ್ದಾರ ಸಿದ್ದಯ್ಯಸ್ವಾಮಿ ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


No comments:

Post a Comment

ವಡಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ವಡಗೇರಾ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡ...